ಒಬ್ರು ಫ್ಯಾಮಿಲಿ ಹೆಂಗಸು ಮೆಸೇಜ್ ಮಾಡಿದ್ರು. ಅವರಿಗೆ ಸಹಾಯ ಬೇಕಿತ್ತಂತೆ. ಯಾವ ತರ ಸಹಾಯ ಅಂತ ವಿಚಾರಿಸಿದಾಗ, ಕೆಲವು ದಿನಗಳ ಹಿಂದೆ ಇದೇ ಫೇಸ್ಬುಕ್ ನಲ್ಲಿ ಅವರಿಗೆ ಒಬ್ಬ ಹುಡುಗನ ಪರಿಚಯವಾಗಿದೆ ಮೊದ ಮೊದಲು ಸಾಮಾನ್ಯವಾಗಿದ್ದ ಅವರ ಮಾತುಕತೆ ಮುಂದೆ ಪರಸ್ಪರ ಮೊಬೈಲ್ ನಂಬರ್ ನೀಡುವ ಮಟ್ಟಕ್ಕೆ ತಿರುಗಿ ವಾಟ್ಸಾಫ್ ಮೆಸೇಜ್, ಇಮೋಜಿಗಳು, ವಾಯ್ಸ್ ಮೆಸೇಜ್, ಫೋನ್ ಕಾಲ್ ಹೀಗೆ ವಿಡಿಯೋ ಕಾಲ್ ವರೆಗೂ ಬೆಳೆದಿದೆ. ಗಂಡ ಮತ್ತು ಮಕ್ಕಳ ಬಳಿ ಮುಚ್ಚಿಟ್ಟು ಹೀಗೆ ಮಾತನಾಡಿದಾರೆ ಆದರೆ ಯಾವತ್ತಿಗೂ ಆಕೆಯಾಗಲಿ ಆ ಹುಡುಗನಾಗಲಿ ಕಾಮದ ಬಗ್ಗೆ ಮಾತನಾಡಿರಲಿಲ್ಲ.. ಕಾರಣಾಂತರಗಳಿಂದ ಒಂದು ದಿನ ಕಾಮದ ಟಾಪಿಕ್ ಬಂದಿದೆ ಮನೆಯ ಒಂದಷ್ಟು ಸಮಸ್ಯೆಗಳಿಂದ ಈಕೆಗೂ ಮನೆಯಲ್ಲಿ ಸಿಗದ ಆ ಸುಖದ ಬಯಕೆಯಾಗಿದೆ.
ಇದೇ ಸಮಯ ಅಂತ ಕಾದಿದ್ದನೋ ಏನೋ ಆ ಹುಡುಗ ಮಟ ಮದ್ಯಾಹ್ನ ವಿಡಿಯೋ ಕಾಲ್ ಮಾಡಿ ತನ್ನ ಆಟ ಶುರುವಿಟ್ಟಿದ್ದಾನೆ ಸ್ನೇಹದಲ್ಲಿ ತುಂಬಾ ಸಲುಗೆಯಿದ್ದರಿಂದ ಇಬ್ಬರೂ ಪರಸ್ಪರ ಬೆತ್ತಲಾಗಿ ವಿಡಿಯೋ ಕಾಲ್ ನಲ್ಲಿ ಎಲ್ಲಾ ತರಹದ ಬಯಕೆ ಹೀಡೆರಿಸಿಕೊಂಡಿದ್ದಾರೆ. ಅಲ್ಲಿಂದ ಇಬ್ಬರಿಗೂ ಸಲುಗೆ ಇನ್ನಷ್ಟು ಬೆಳೆದ ಪ್ರತಿದಿನ ಪರಸ್ಪರ ಫೋಟೋ ವಿನಿಮಯ ಶುರುವಾಗಿದೆ. ರುಚಿ ಕಂಡ ಹುಡುಗ ಸುಮ್ಮನಾಗುವನೇ? ಪ್ರತಿದಿನ ಬೆತ್ತಲೆ ಫೋಟೋಗಾಗಿ ಪೀಡಿಸಿದ್ದಾನೆ ಆದರೆ ಈಕೆಗೆ ಪ್ರತಿಕ್ಷಣ ಅದೇ ಕಾಮದ ಮತ್ತನಲ್ಲಿರಲು ಇಷ್ಟವಿರುವುದಿಲ್ಲ ಕಾರಣ ಅವನನ್ನು ವಿರೋಧಿಸಿದ್ದಾಳೆ.. ಇಲ್ಲಿಂದ ಆ ಹುಡುಗನ ನಿಜಸ್ವರೂಪ ಬಯಲಾಗಿದೆ ಆಕೆಯ ಫೋಟೋಗಳನ್ನು ಸ್ನೇಹಿತರಿಗೆ ಮತ್ತು ಪೇಜ್ ಗಳಿಗೆ ಹಂಚಲು ಶುರುಮಾಡಿದ್ದಾನೆ ಒಂದಷ್ಟು ಪೋಟೋಗಳು ಹೊರ ಬರುತ್ತಲೇ ರಿಪೋರ್ಟ್ ಮಾಡಿ ಡಿಲೀಟ್ ಆಗುವಂತೆ ಮಾಡಿದ್ದಾರೆ. ನಂತರ ಸಮಸ್ಯೆ ಎಂದರೆ ವಿಡಿಯೋ ಕಾಲ್.. ಆ ದಿನ ವಿಡಿಯೋ ಕಾಲ್ ಮಾಡಿದ್ದನ್ನು ಸ್ಕ್ರೀನ್ ರೆಕಾರ್ಡರ್ ಮೂಲಕ ರೆಕಾರ್ಡ್ ಮಾಡಿ ಈಕೆಗೆ ಹೆದರಿಸಲು ಶುರು ಮಾಡಿದ್ದಾನೆ ಆ ಹುಡುಗ ದುಡ್ಡಿಗಾಗಿ ಇಷ್ಟೆಲ್ಲ ಮಾಡುತ್ತಿರಬಹುದು ಎಂದುಕೊಂಡರೆ ಇಲ್ಲ ಆತ ಕೇವಲ ತನ್ನ ಕಾಮತೃಷೆಯನ್ನು ಶಮನಿಸಲು ಈಕೆಯನ್ನು ಬೆತ್ತಲೆ ಫೋಟೋಗಾಗಿ ಪೀಡಿಸುತ್ತಿದ್ದಾನೆ.
ಪೋಲೀಸರ ಬಳಿ ಹೋಗೋಣವೆಂದರೆ ಮರ್ಯಾದೆಗೆ ಅಂಜುವ ಜನ ಆಕೆಗೂ ವಯಸ್ಸು ಮೀರಿಲ್ಲ ಬಹುಶಃ 32-35 ಇರಬಹುದು ಗಂಡನಿಗೆ ತುಸು ಹೆಚ್ಚೇ ವಯಸ್ಸಾಗಿದೆಯಂತೆ(ಆಕೆ ಹೇಳಿದಂತೆ) ಇದರಿಂದ ಹೊರಬರಲು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಕೇಳಿಕೊಂಡಾಗ ನಾನು ಆ ಹುಡುಗನ ಪೋಟೋ ಸಮೇತ ಒಂದಷ್ಟು ಮಾಹಿತಿ ಪಡೆದೆ ಮೊದಲು ಕ್ಯಾಶುಯಲ್ ಆಗಿ ಮಾತನಾಡಿ ವಿಷಯ ಪ್ರಸ್ತಾಪಿಸುತ್ತಲೇ ಪಾಪ ಕಂದ ಬೈಯ್ಯುವುದಕ್ಕೆ ಶುರು ಮಾಡಿದ ಅಮ್ಮ ಅಕ್ಕ ತಂಗಿ ಹೀಗೇ ಏನೇನೋ..
ಅವನಿಗೆ ಆತ ಅತೀ ಬುದ್ಧಿವಂತ ಅನ್ನಿಸಿರಬೇಕು ಅದರಿಂದಲೇ ಮೆರೆಯುತ್ತಿದ್ದ. ಇದು ಸೋಷಿಯಲ್ ಮೀಡಿಯಾ ಕಾಲ ಎಂದು ಮರೆತಿದ್ದ ಅನ್ಸುತ್ತೆ ಅವನ ಪೋಟೋ ಮತ್ತು ಪೋನ್ ನಂಬರ್ ನಾ ಸಹಾಯದಿಂದ ಅವನ ಫೇಸ್ಬುಕ್ ಅಕೌಂಟ್ ಪತ್ತೆ ಮಾಡಿದ್ವಿ ಅವನ ಮತ್ತು ನನ್ನ ಮೂಚ್ಯುಲ್ ಪ್ರೆಂಡ್ ಲಿಸ್ಟ್ ನಲ್ಲಿ ನನ್ನ ಆತ್ಮೀಯ ಸ್ನೇಹಿತನಿದ್ದ ಅವನನ್ನು ಕರೆಯಿಸಿ ಇವನ ಬಗ್ಗೆ ವಿಚಾರಿಸಿದೆ ಅವನಿಗೂ ಪರಿಚಯ ಇರಲಿಲ್ಲ ಆದರೆ ಅವನು ನನ್ನ ಸ್ನೇಹಿತನ ನೆಚ್ಚಿನ ನಟನ ಅಭಿಮಾನಿಯಾಗಿದ್ರಿಂದ ಫೇಸ್ಬುಕ್ ಫ್ರೆಂಡ್ ಆಗಿದ್ದ. ಅವನ ಅಕೌಂಟ್ ಒಪನ್ ಮಾಡಿದಾಗ ಅವನಿಗೆ ಮದುವೆಯಾಗಿ ಮಗು ಇರುವುದು ಖಾತ್ರಿಯಾಯ್ತು ಈ ಮದುವೆ ಬರ್ತ್ ಡೇ ಫಂಕ್ಷನ್ ಅಂತ ಹೇಳಿ ಶುಭಹಾರೈಸಿದ್ದ ಅವನ ಮನೆಯ ಹೆಣ್ಣು ಮಕ್ಕಳ ಫೋಟೋ ಸೇವ್ ಮಾಡಿ ನನ್ನ ಮೊಬೈಲಿಗೆ ಕಳುಹಿಸಿಕೊಂಡು ನನ್ನ ಸ್ನೇಹಿತನ ಮೊಬೈಲ್ ನಲ್ಲಿ ಡಿಲೀಟ್ ಮಾಡ್ದೆ(ಈ ವಿಷಯ ನನ್ನ ಸ್ನೇಹಿತನಿಗೂ ಗೊತ್ತಿರಲಿಲ್ಲ) "ಮುಳ್ಳನ್ನ ಮುಳ್ಳಿನಿಂದಲೇ ತಗೀಬೇಕು" ಅನ್ನುವ ಹಾಗೆ ಅವನಿಗೆ ಅವರ ಫ್ಯಾಮಿಲಿ ಪೋಟೋಗಳನ್ನು ಕಳುಹಿಸಿದಾಗ ಅವನಿಗೆ ಗೊತ್ತಾಯ್ತು ತಾನು ಟ್ರ್ಯಾಪ್ ಆಗಿದ್ದೇನೆ ಅಂತ..
ಮೊದಲು ಕೂಗಾಡಿದ ನಂತರ ನನ್ನ ಪೇಜಿನಲ್ಲಿ ಪೋಸ್ಟ್ ಮಾಡುವಂತೆ ಹೆದರಿಸಿ ಸ್ಕ್ರೀನ್ ಶಾಟ್ ಕಳುಹಿಸಿದಾಗ ದಾರಿಗೆ ಬಂದ. ಒಂದು ಕಡೆ ಭೇಟಿ ಮಾಡುವ ಪ್ಲಾನ್ ಮಾಡಿದೆವು. ಭೇಟಿ ಸಹ ಆದೆವು ಅವನ ಜೊತೆ ಒಂದಷ್ಟು ಜನ ಪುಡಿ ರೌಡಿಗಳನ್ನ ಕರೆದುಕೊಂಡು ಬಂದಿದ್ದ ಇದರ ಅರಿವು ನನಗೆ ಮೊದಲೇ ಇತ್ತು ನಾವು ಭೇಟಿ ಮಾಡುವ ಸ್ಥಳದ ಹತ್ತಿರದಲ್ಲಿ ನನ್ನ ಸ್ನೇಹಿತರೊಬ್ಬರು ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ ಆ ದಿನ ಅವರು ರಜೆಯಲ್ಲಿದ್ದರಿಂದ ಅವರನ್ನು Unofficial ಆಗಿ ಕರೆದುಕೊಂಡು ಹೋಗಿದ್ದೆ. ಬಹುಶಃ ಆ ಹುಡುಗನದ್ದು ಅಲ್ಲಿಯೇ ಸುತ್ತ ಮುತ್ತ ಏರಿಯಾ ಇರಬಹುದು ನಮ್ಮ ಸಾಹೇಬರ ಮುಖ ಪರಿಚಯ ಇತ್ತೇನೋ ಎಲ್ಲರೂ ಓಟಕಿತ್ತರು ಈ ಹುಡುಗನಿಗೆ ಮೆಸೇಜ್ ಮಾಡ್ದೆ "ಸರ್ ಗೆ ಏನು ಗೊತ್ತಿಲ್ಲ ಕ್ಯಾಶುಯಲ್ ಮೀಟಿಂಗ್ ಪರಿಚಯದ ಹುಡುಗ ಅಂದಿದಿನಿ ನೀನೇ ಎಲ್ಲಾ ತೊರುಸ್ಕೊಡಬೇಡ" ಅಂತ ಅವನೊಬ್ಬನೇ ಮತ್ತೆ ಬಂದ. ಕೂತು ಮಾತನಾಡಿದೆವು. ನನ್ನ ಸ್ನೇಹಿತರಿಗೆ ಕಾಫಿ ಆರ್ಡರ್ ಮಾಡಿ ನಾವು ಬೇರೆ ಟೆಬಲ್ನಲ್ಲಿ ಕೂತು ಆಕೆಯ ಪೋಟೋ ವಿಡಿಯೋ ಡಿಲೀಟ್ ಮಾಡಿಸ್ದೆ ಅದೃಷ್ಟವಶಾತ್ ಆಕೆಯ ಫೋಟೋ ಹೆಚ್ಚು ಕಡೆ ಶೇರ್ ಆಗಿರಲಿಲ್ಲ ಪೋಸ್ಟ್ ಮಾಡಿದ್ದ ಒಂದೈದು ಪೇಜ್ ಗಳು ಅವನದ್ದೆ ಆಗಿತ್ತು ಮತ್ತು ಅದು ಆಕೆಗೆ ಮಾತ್ರ ಕಾಣುವಂತೆ ಪ್ರೈವಸಿ ಹಾಕಿದ್ದ.. ಅವನೆದುರೆ ನನ್ನ ಪೋನಿನಲ್ಲಿದ್ದ ಅವನ ಮನೆಯವರ ಫೋಟೋಗಳನ್ನು ಡಿಲೀಟ್ ಮಾಡಿದೆ..
ಮತ್ತೆ ಅವರ ಮನೆಯವರ ಫೇಸ್ಬುಕ್ ಅಕೌಂಟ್ ಒಪನ್ ಮಾಡಿ ತೋರಿಸಿದೆ ಅದರಲ್ಲಿ ಆಗಲೇ ನನ್ನ ಹತ್ತು ಹದಿನೈದು ಜನ ಮ್ಯೂಚುಯಲ್ ಪ್ರೆಂಡ್ಸ್ ಇದ್ರು.
ಈ ಕಥೆ ಇಲ್ಲಿಗೆ ಮುಗಿಸಿದರೆ ಸರಿ ಇನ್ನೆಲ್ಲೋ ಸ್ಟೊರ್ ಮಾಡಿಕೊಂಡು ಕ್ಯಾತೆ ತೆಗೆದರೆ ಮತ್ತೆ "ಮುಳ್ಳನ್ನ ಮುಳ್ಳಿನಿಂದಲೇ ತೆಗೆಯುವ" ತಂತ್ರ ಬಳಸಬೇಕಾಗುತ್ತೆ ಅಂತ ಎಚ್ಚರಿಸಿ ಬಂದೆ..
ಇದಾಗಿ 10 ದಿನ ಕಳೆದಿದೆ ಈಗ ಯಾವುದೇ ತೊಂದರೆ ಇಲ್ಲ ಎಂದು ಆಕೆ ಮೆಸೇಜ್ ಮಾಡಿದ್ದಾರೆ ಆಕೆಗೂ ಬುದ್ಧಿ ಹೇಳಲಾಗಿದೆ..
ಸಲುಗೆ ಬೆಳೆಸುವುದು ತಪ್ಪಿಲ್ಲ ಆದರೆ ಅದರ ಮಿತಿ ಮೀರಬಾರದು. ಹುಡುಗರು ಸಹ ಕಾಮಪಿಚಾಚಿಗಳಂತೆ ಆಡಬಾರದು. ನಿಮ್ಮ ಕಾಮತೃಷೆ ಶಮನಕ್ಕೆ ಸಾಕಷ್ಟು ಫೇಜ್ಗಳಿವೆ ಆ ಫೇಜ್ಗಳಲ್ಲಿ ನೈಜ ಮತ್ತು ಕಾಲ್ಪನಿಕ ಕತೆಗಳಿವೆ ಓದಿ ನಿಮ್ಮ ಕಾಮ ತಣಿಸಿ. ಹಂಗೂ ನಿಮಗೆ ಯಾರದ್ರೂ ಸಿಕ್ರಾ ಮೊದಲು ಅವರನ್ನ ಗೌರವಿಸುವುದು ಕಲಿಯರಿ ಅವರಿಗೂ ಒಂದು ಕುಟುಂಬ ಇದ್ದರೆ ನಿಮಗೂ ಒಂದು ಕುಟುಂಬ ಇರತ್ತೆ ಮರೆಯಬೇಡಿ..
Comments
Post a Comment